ಸಾಮಾನ್ಯವಾಗಿ ಜ್ವರ ಬಂದಾಗ

ಸಾಮಾನ್ಯವಾಗಿ ಜ್ವರ ಬಂದಾಗ ನಾವು ಆಹಾರವಾಗಿ ಬ್ರೆಡ್, ಬನ್‍ಗಳನ್ನು ಸೇವಿಸುತ್ತೇವೆ. ಇಂಥಹ ಆಹಾರಗಳು ಜ್ವರದ ಸಮಯದಲ್ಲಿ ಸೇವಿಸುವುದರಿಂದ ನಮ್ಮ ಜೀರ್ಣಕ್ರಿಯೆಯನ್ನು ಇನ್ನೂ ನಿಧಾನಗೊಳಿಸುತ್ತದೆ.

ಜ್ವರ ಬಂದಾಗ ನಮ್ಮ ಜೀರ್ಣ ಕ್ರಿಯೆಯನ್ನು ಬಹಳ ನಿಧಾನವಾಗಿರುತ್ತದೆ.

ಯಾಕೆಂದರೆ ನಮ್ಮ ದೇಹದಲ್ಲಿ ಶಕ್ತಿಯ ಕೊರತೆ ಇದ್ದು ಆಹಾರವನ್ನು ಜೀರ್ಣಿಸಿಕೊಳ್ಳಲು ಹೆಚ್ಚು ಶಕ್ತಿ ಬೇಕಾಗುತ್ತದೆ ಎಂದು ಆಯುರ್ವೇದಿಕ್ ವೆಲ್‍ನೆಸ್ ಕ್ಲಿನಿಕ್‍ನ ವೈದ್ಯೆ ಡಾ. ಅನುರಾಧ ಹೇಳುತ್ತಾರೆ.

ಜ್ವರ ಬಂದಾಗ ಜೀರ್ಣಕ್ರಿಯೆಗೆ ಸಹಾಯಕವಾಗುವ ಜೊತೆಗೆ ದೇಹಕ್ಕೆ ಉತ್ತಮ ಶಕ್ತಿಯನ್ನು ನೀಡುವ ಆಹಾರ ಹೆಸರು ಬೇಳೆ ಕಿಛಿಡಿ. ಜ್ವರದ ಸಮಯದಲ್ಲಿ ಈ ಕಿಛಿಡಿ ಒಂದು ಉತ್ತಮ ಆಹಾರ ಎಂದರೂ ತಪ್ಪಾಗಲಾರದು. ವಯಸ್ಸಿನ ಮಿತಿ ಇಲ್ಲದ ಎಲ್ಲ ವಯಸ್ಸಿನವರಿಗೂ ಹೊಂದಿಕೊಳ್ಳುವ ಆಹಾರ ಇದಾಗಿದೆ.

ಹೆಸರು ಬೇಳೆಯ ಸಾರು ಕೂಡ ಒಂದು ಉತ್ತಮ ಆಹಾರವಾಗಿ ಜ್ವರದ ಸಮಯದಲ್ಲಿ ನಮ್ಮ ದೇಹಕ್ಕೆ ಉತ್ತಮ ಶಕ್ತಿಯನ್ನು ನೀಡುತ್ತದೆ. ಈ ಸಾರಿನಲ್ಲಿ ಶುಂಠಿ, ಕೊತ್ತಂಬರಿ ಸೊಪ್ಪು, ಕರಿಬೇವು ಹಾಗೂ ಸ್ವಲ್ಪ ಕಾಳುಮೆಣಸು ಹಾಕಿ ಮಾಡುವುದರಿಂದ ದೇಹಕ್ಕೆ ಬಹಳ ಉತ್ತಮ.

ಜ್ವರ ಸಮಯದಲ್ಲಿ ಸಾಮಾನ್ಯವಾಗಿ ಸೇವಿಸುವ ಇನ್ನೊಂದು ಆಹಾರ ಗಂಜಿ. ಚೆನ್ನಾಗಿ ಬೇಯಿಸಿದ ಅನ್ನಕ್ಕೆ ಸ್ವಲ್ಪ ನೀರು ಜಾಸ್ತಿ ಹಾಕಿ ಗಂಜಿ ಮಾಡಿ ಸೇವಿಸುವುದು ಉತ್ತಮ. ಒಂದು ರೀತಿಯಾಗಿ ಈ ಗಂಜಿ ಬೇರೆಲ್ಲಾ ಆಹಾರಗಳಿಂದ ಬಹಳ ಉತ್ತಮವಾಗಿದೆ.

ಜ್ವರದ ಜೊತೆಗೆ ಸಾಮಾನ್ಯವಾಗಿ ಕಂಡುಬರುವ ಮತ್ತೊಂದು ಲಕ್ಷಣ ವಾಂತಿ. ಈ ಸಮಯದಲ್ಲೂ ಆಹಾರಗಳನ್ನು ಸರಿಯಾದ ರೀತಿಯಲ್ಲಿ ಸೇವಿಸಬೇಕಾಗುತ್ತದೆ. ಯಾಕೆಂದರೆ ವಾಂತಿಯಾಗುವ ಸಮಯದಲ್ಲಿ ನಾವು ಬೇಕಾಬಿಟ್ಟಿ ಆಹಾರಗಳನ್ನು ಸೇವಿಸದೆ ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಸೇವಿಸುವುದರಿಂದ ನಮ್ಮ ದೇಹದಲ್ಲಿ ಜೀರ್ಣಕ್ರಿಯೆಗೆ ಸಾಹಾಯಕವಾಗುವ ಅಂಗಾಗಗಳಿಗೆ ವಿಶ್ರಂತಿಯ ಅಗತ್ಯ ವಿರುತ್ತದೆ. ಇಂಥಹ ಸಮಯದಲ್ಲಿ ಅರಳು(ಹೊದ್ಲು)ಗಂಜಿ, ಹುರಿದಕ್ಕಿ ಗಂಜಿ, ಕುಡಿಯುವುದರಿಂದ ನಮ್ಮ ಜೀರ್ಣಕ್ರಿಯೆಯ ಅಂಗಾಗಗಳಿಗೆ ಹೆಚ್ಚು ಒತ್ತಡ ಬೀಳುವುದಿಲ್ಲ ಹಾಗೂ ನಿಶ್ಯಕ್ತಿಯಾದ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ